Skip to main content

Police Roundup

ಜೈಲಿನಿಂದ ತಪ್ಪಿಸಿಕೊಂಡಿದ್ದ ‘ಖತರ್ನಾಕ್’ ಖೈದಿ 15 ವರ್ಷಗಳ ನಂತರ ಅರೆಸ್ಟ್: ಗೋವಾದಲ್ಲಿ ಹಾಸನ ಪೊಲೀಸರ ಭರ್ಜರಿ ಕಾರ್ಯಾಚರಣೆ

Share News

ಹಾಸನ: ಅತ್ಯಾಚಾರ, ಕೊಲೆ ಯತ್ನದಂತಹ ಗಂಭೀರ ಪ್ರಕರಣಗಳಲ್ಲಿ ಭಾಗಿಯಾಗಿ, ಕಳೆದ 15 ವರ್ಷಗಳಿಂದ ಪೊಲೀಸರ ಕಣ್ಣು ತಪ್ಪಿಸಿ ಓಡಾಡುತ್ತಿದ್ದ ವಿಚಾರಣಾಧೀನ ಖೈದಿಯನ್ನು ಹಾಸನ ಪೊಲೀಸರು ಸಿನೆಮಾ ಮಾದರಿಯಲ್ಲಿ ಗೋವಾದಲ್ಲಿ ಬಂಧಿಸಿದ್ದಾರೆ.

 

​ಘಟನೆಯ ಹಿನ್ನೆಲೆ:

ಸಕಲೇಶಪುರ ತಾಲೂಕಿನ ನಲ್ಲುಲ್ಲಿ ಗ್ರಾಮದ ನಿವಾಸಿ ಚನ್ನಕೇಶವ (ಅಲಿಯಾಸ್ ಕೇಶವ, ಸುರೇಶ) ಬಂಧಿತ ಆರೋಪಿ. ಈತ 2011ರಲ್ಲಿ ಐಪಿಸಿ ಸೆಕ್ಷನ್ 376 (ಅತ್ಯಾಚಾರ), 307 (ಕೊಲೆ ಯತ್ನ) ಮತ್ತು 394 (ದರೋಡೆ) ಅಡಿ ಬಂಧನಕ್ಕೊಳಗಾಗಿದ್ದನು. ಸಕಲೇಶಪುರ ಜೈಲಿನಲ್ಲಿ ವಿಚಾರಣಾಧೀನ ಖೈದಿಯಾಗಿದ್ದ ಈತ, 2011ರಲ್ಲಿ ಜೈಲಿನಿಂದ ನಾಟಕೀಯವಾಗಿ ತಪ್ಪಿಸಿಕೊಂಡು ಪೊಲೀಸರಿಗೆ ಸವಾಲು ಹಾಕಿದ್ದನು.

 

ಜೈಲಿನಿಂದ ಪರಾರಿಯಾದ ನಂತರ ಈತ ಮುಂಬೈ ಸೇರಿದಂತೆ ದೇಶದ ವಿವಿಧ ನಗರಗಳಲ್ಲಿ ತನ್ನ ಗುರುತು ಮರೆಮಾಚಿ ಹೋಟೆಲ್‌ಗಳಲ್ಲಿ ಕೆಲಸ ಮಾಡುತ್ತಿದ್ದನು. ಪೊಲೀಸರು ಈತನ ಪತ್ತೆಗಾಗಿ ಹಲವು ವರ್ಷಗಳಿಂದ ಹುಡುಕಾಟ ನಡೆಸುತ್ತಿದ್ದರು. ಇತ್ತೀಚೆಗೆ ಈತ ಗೋವಾದ ರೆಸ್ಟೋರೆಂಟ್ ಒಂದರಲ್ಲಿ ಕೆಲಸ ಮಾಡುತ್ತಿರುವ ಬಗ್ಗೆ ಖಚಿತ ಮಾಹಿತಿ ಲಭಿಸಿದೆ.

 

ಹಾಸನ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (SP) ಶುಭಾನ್ವಿತಾ, ಎಎಸ್ಪಿಗಳಾದ ತಮ್ಮಯ್ಯ ಮತ್ತು ಶ್ರೀನಿಧಿ ಅವರ ಮಾರ್ಗದರ್ಶನದಲ್ಲಿ ವಿಶೇಷ ತಂಡ ರಚಿಸಲಾಗಿತ್ತು. ಸಿಬ್ಬಂದಿಗಳಾದ ರವಿ ಕಬ್ಬತ್ತಿ, ಸೋಮಶೇಖರ ಹಾಗೂ ಬಸವರಾಜು ಒಳಗೊಂಡ ತಂಡ ಗೋವಾಕ್ಕೆ ತೆರಳಿ, ಆರೋಪಿಯನ್ನು ಯಶಸ್ವಿಯಾಗಿ ಬಂಧಿಸಿ ಹಾಸನಕ್ಕೆ ಕರೆತಂದಿದ್ದಾರೆ.

 

​ದಶಕಗಳ ಕಾಲ ಕಾನೂನಿನ ಕೈಗೆ ಸಿಗದೆ ಅಲೆದಾಡುತ್ತಿದ್ದ ಹಳೆಯ ಅಪರಾಧಿಯನ್ನು ಮತ್ತೆ ಜೈಲಿಗಟ್ಟುವಲ್ಲಿ ಹಾಸನ ಪೊಲೀಸರು ಯಶಸ್ವಿಯಾಗಿದ್ದು, ಇಲಾಖೆಯ ಈ ಕಾರ್ಯಾಚರಣೆಗೆ ಸಾರ್ವಜನಿಕ ವಲಯದಲ್ಲಿ ಮೆಚ್ಚುಗೆ ವ್ಯಕ್ತವಾಗಿದೆ.

 


Share News

Police Roundup Desk

ತ್ಯಾಗರಾಜ್ ವಿ ಎಸ್, (ಕಳೆದ 27 ವರ್ಷಗಳಿಂದ ರಾಷ್ಟ್ರ ಹಾಗೂ ರಾಜ್ಯ ಮಟ್ಟದ ಸುದ್ದಿವಾಹಿನಿಗಳಲ್ಲಿ Investigative Journalist ಆಗಿ ಸೇವೆ ಸಲ್ಲಿಸಿದ ಅನುಭವ.) ಪ್ರಧಾನ ಸಂಪಾದಕರು, ಪೊಲೀಸ್ ರೌಂಡಪ್ News

Leave a Reply

Your email address will not be published. Required fields are marked *

Solverwp- WordPress Theme and Plugin