Skip to main content

Police Roundup

ಬೆಂಗಳೂರು: ಕನಸಿನ ಬೈಕ್ ಕೊಂಡ ದಿನವೇ ಕಳ್ಳರ ಕೈಚಳಕ; ಸಾಲ ಮಾಡಿ ತಂದಿದ್ದ ಕೆಟಿಎಂ ಬೈಕ್ ಕಳ್ಳತನ

Share News

ನೆಲಮಂಗಲ: ಬಹಳ ಆಸೆಯಿಂದ, ಕಷ್ಟಪಟ್ಟು ಸಾಲ ಮಾಡಿ ಖರೀದಿಸಿದ ಹೊಸ ಬೈಕ್ ಕಳ್ಳರ ಪಾಲಾದ ಘಟನೆ ನೆಲಮಂಗಲ ನಗರದ ವೀವರ್ಸ್ ಕಾಲೋನಿಯಲ್ಲಿ ನಡೆದಿದೆ. ಬೈಕ್ ಖರೀದಿಸಿದ ಮೊದಲ ರಾತ್ರಿಯೇ ಈ ಕೃತ್ಯ ನಡೆದಿದ್ದು, ಮಾಲೀಕ ಕಂಗಾಲಾಗಿದ್ದಾನೆ.

 

ನೆಲಮಂಗಲದ ವೀವರ್ಸ್ ಕಾಲೋನಿಯ ನಿವಾಸಿ ಚಂದು ಎಂಬುವವರು ಬಹುದಿನಗಳ ಕನಸಿನ ಕೆಟಿಎಂ (KTM) ಬೈಕ್ ಅನ್ನು ಸಾಲದ ಮೂಲಕ ಹಣ ಹೊಂದಿಸಿ ಖರೀದಿಸಿದ್ದರು. ಹೊಸ ಬೈಕ್ ಮನೆಗೆ ತಂದ ಸಂಭ್ರಮದಲ್ಲಿದ್ದ ಅವರು, ರಾತ್ರಿ ಮನೆಯ ಮುಂದೆ ಬೈಕ್ ಅನ್ನು ಸುರಕ್ಷಿತವಾಗಿ ಲಾಕ್ ಮಾಡಿ ನಿಲ್ಲಿಸಿ ಮಲಗಿದ್ದರು. ಆದರೆ, ಅದೇ ರಾತ್ರಿ ಹೊಂಚು ಹಾಕಿದ್ದ ಕಳ್ಳರ ಗ್ಯಾಂಗ್ ಬೈಕ್ ಸಮೇತ ಪರಾರಿಯಾಗಿದೆ.

 

ಬೈಕಿನಲ್ಲಿ ಬಂದ ಕಳ್ಳರು ಕ್ಷಣಾರ್ಧದಲ್ಲಿ ಲಾಕ್ ಮುರಿದು ಕೆಟಿಎಂ ಬೈಕ್ ಕದ್ದೊಯ್ಯುವ ದೃಶ್ಯ ಸಮೀಪದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಈ ಗ್ಯಾಂಗ್ ಅತ್ಯಂತ ಚಾಣಾಕ್ಷತನದಿಂದ ಬೈಕ್ ಹೊತ್ತೊಯ್ದು ಎಸ್ಕೇಪ್ ಆಗಿರುವುದು ಕಂಡುಬಂದಿದೆ.

 

ಸಾಲ ಮಾಡಿ ಪ್ರೀತಿಯಿಂದ ಈ ಬೈಕ್ ತಂದಿದ್ದೆ, ಆದರೆ ಚಕ್ರ ತಿರುಗುವ ಮುನ್ನವೇ ಕಳ್ಳರ ಪಾಲಾಗಿದೆ” ಎಂದು ಬೈಕ್ ಸವಾರ ಚಂದು ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ. ಹಗಲು ರಾತ್ರಿ ಎನ್ನದೆ ಕೆಲಸ ಮಾಡಿ ಕೂಡಿಸಿಟ್ಟ ಹಣ ಹಾಗೂ ಮಾಡಿದ ಸಾಲದ ನಡುವೆ ಈ ಘಟನೆ ಅವರಿಗೆ ದೊಡ್ಡ ಆಘಾತ ನೀಡಿದೆ.

 

​ಈ ಸಂಬಂಧ ನೆಲಮಂಗಲ ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸಿಸಿಟಿವಿ ದೃಶ್ಯಾವಳಿಗಳ ಆಧಾರದ ಮೇಲೆ ಪೊಲೀಸರು ಕಳ್ಳರಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.


Share News

Police Roundup Desk

ತ್ಯಾಗರಾಜ್ ವಿ ಎಸ್, (ಕಳೆದ 27 ವರ್ಷಗಳಿಂದ ರಾಷ್ಟ್ರ ಹಾಗೂ ರಾಜ್ಯ ಮಟ್ಟದ ಸುದ್ದಿವಾಹಿನಿಗಳಲ್ಲಿ Investigative Journalist ಆಗಿ ಸೇವೆ ಸಲ್ಲಿಸಿದ ಅನುಭವ.) ಪ್ರಧಾನ ಸಂಪಾದಕರು, ಪೊಲೀಸ್ ರೌಂಡಪ್ News

Leave a Reply

Your email address will not be published. Required fields are marked *

Solverwp- WordPress Theme and Plugin