Skip to main content

Police Roundup

ವರಸೆಯಲ್ಲಿ ಅಕ್ಕ-ತಮ್ಮ; ಇನ್‌ಸ್ಟಾಗ್ರಾಮ್ ಪ್ರೀತಿಗೆ ಮದುವೆಯೇ ಅಂತ್ಯ! ರಕ್ಷಣೆ ಕೋರಿ ಪೊಲೀಸ್ ಮೆಟ್ಟಿಲೇರಿದ ಜೋಡಿ

Share News

ಚಿಕ್ಕಬಳ್ಳಾಪುರ: ಪ್ರೀತಿಗೆ ಕಣ್ಣಿಲ್ಲ, ವಯಸ್ಸಿನ ಮಿತಿಯಿಲ್ಲ ಎಂಬ ಮಾತಿನಂತೆ, ಇಲ್ಲಿ ವರಸೆಯೂ ಅಡ್ಡಿಯಾಗಿಲ್ಲ! ಸಂಬಂಧದಲ್ಲಿ ಅಕ್ಕ-ತಮ್ಮನಾಗಬೇಕಿದ್ದ ಜೋಡಿಯೊಂದು ಮನೆಯವರ ತೀವ್ರ ವಿರೋಧದ ನಡುವೆಯೂ ಪ್ರೀತಿಸಿ, ಮದುವೆಯಾಗಿ ಈಗ ರಕ್ಷಣೆಗಾಗಿ ಪೊಲೀಸ್ ಠಾಣೆಯ ಮೆಟ್ಟಿಲೇರಿದೆ.

 

ದೇವನಹಳ್ಳಿ ಮೂಲದ ಶಶಿಕಲಾ (29) ಹಾಗೂ ಹೊಸಕೋಟೆಯ ಪ್ರವೀಣ್ (24) ಈ ಪ್ರೇಮ ಕಥೆಯ ನಾಯಕ-ನಾಯಕಿ. ಮೂರು ವರ್ಷಗಳ ಹಿಂದೆ ಸಂಬಂಧಿಕರ ಮನೆಯಲ್ಲಿ ಪರಿಚಯವಾಗಿದ್ದ ಈ ಜೋಡಿ, ನಂತರ ಇನ್‌ಸ್ಟಾಗ್ರಾಮ್ ಮೂಲಕ ನಿರಂತರ ಸಂಪರ್ಕದಲ್ಲಿದ್ದರು. ಕಾಲಕ್ರಮೇಣ ಇವರ ಗೆಳೆತನ ಗಾಢವಾದ ಪ್ರೀತಿಗೆ ತಿರುಗಿತ್ತು.

 

ಕುಟುಂಬದ ಲೆಕ್ಕಾಚಾರದ ಪ್ರಕಾರ ಪ್ರವೀಣ್, ಶಶಿಕಲಾಗೆ ವರಸೆಯಲ್ಲಿ ‘ತಮ್ಮ’ನಾಗಬೇಕು. ಈ ಕಾರಣದಿಂದಾಗಿ ಇವರ ಪ್ರೀತಿಗೆ ಎರಡೂ ಕುಟುಂಬಗಳಿಂದ ತೀವ್ರ ವಿರೋಧ ವ್ಯಕ್ತವಾಗಿತ್ತು. ಮನೆಯವರು ಶಶಿಕಲಾಗೆ ಬೇರೆ ಯುವಕನ ಜೊತೆ ಮದುವೆ ನಿಶ್ಚಯಿಸಿ, ಕಲ್ಯಾಣ ಮಂಟಪವನ್ನೂ ಬುಕ್ ಮಾಡಿದ್ದರು.

 

ಮನೆಯವರು ನಿಗದಿಪಡಿಸಿದ ಮದುವೆಗೆ ಒಪ್ಪದ ಶಶಿಕಲಾ, ಕೊನೆ ಕ್ಷಣದಲ್ಲಿ ತನ್ನ ಪಟ್ಟು ಬಿಡದೆ ಪ್ರಿಯಕರ ಪ್ರವೀಣ್ ಜೊತೆ ಪರಾರಿಯಾಗಿದ್ದಾರೆ. ಪ್ರವೀಣ್ ಜೊತೆ ವಿವಾಹವಾದ ನಂತರ, ಈಗ ಮನೆಯವರಿಂದ ಜೀವ ಬೆದರಿಕೆ ಇದೆ ಎಂದು ಹೆದರಿ ಈ ಜೋಡಿ ಚಿಕ್ಕಬಳ್ಳಾಪುರದ ಮಹಿಳಾ ಪೊಲೀಸ್ ಠಾಣೆಗೆ ಆಗಮಿಸಿ ರಕ್ಷಣೆ ಕೋರಿದ್ದಾರೆ.

​ಸದ್ಯ “ಅಕ್ಕ-ತಮ್ಮ”ನ ವರಸೆಯ ಈ ಮದುವೆ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದ್ದು, ಸಾರ್ವಜನಿಕ ವಲಯದಲ್ಲಿ ಪರ-ವಿರೋಧದ ಚರ್ಚೆಗಳು ಆರಂಭವಾಗಿವೆ.

 


Share News

Police Roundup Desk

ತ್ಯಾಗರಾಜ್ ವಿ ಎಸ್, (ಕಳೆದ 27 ವರ್ಷಗಳಿಂದ ರಾಷ್ಟ್ರ ಹಾಗೂ ರಾಜ್ಯ ಮಟ್ಟದ ಸುದ್ದಿವಾಹಿನಿಗಳಲ್ಲಿ Investigative Journalist ಆಗಿ ಸೇವೆ ಸಲ್ಲಿಸಿದ ಅನುಭವ.) ಪ್ರಧಾನ ಸಂಪಾದಕರು, ಪೊಲೀಸ್ ರೌಂಡಪ್ News

Leave a Reply

Your email address will not be published. Required fields are marked *

Solverwp- WordPress Theme and Plugin